ಒಂದು ರೈಲಿನ ಪಯಣ.
ತರತರಹದ ವಾಸನೆಗಳು, ಪ್ಯಾಂಟ್ರಿ ಕಾರ್ ಸೇರಿ;
ತರತರಹದ ಮೈಕಟ್ಟು, ಅದಕ್ಕೆ ಹೊಂದದ ಹೊಟ್ಟೆಬಾಕತನ;
ನೀರುನಿಂತ ನೆಲದಲ್ಲಿ ಗಾಲಿಯ ಗುರುತು;
ತರತರಹದ ಉಸಿರು, ತರತರಹದ ಹಸಿರು, ತರತರಹದ ಭಾಷೆಗಳು;
ಊರಿಂದೂರಿಗೆ ಹೋಗಲು ಬೇರೆ-ಬೇರೆಯೇ ಕಾರಣಗಳು;
ಮೊಬೈಲ್‍ನಿಂದ ಎಲ್ಲಿಂದೆಲ್ಲಿಗೆ ತಟ್ಟನೆ ಸಂಪರ್ಕ;
ಬೇಕೋ ಬೇಡವೋ ಪದೇ ಪದೇ ಉದ್ದುದ್ದ ಮಾತುಕತೆ;
ಎಲ್ಲಿದ್ದೀರಿ ಊಟವಾಯಿತೇ ಎಂದು, ತೋಚದೇ ತೆಪ್ಪಗೆ ಕೂತವರಿಗೆ ಹಟಾತ್ತನೆ ಜೀವ ತುಂಬುವ ಕರೆಗಳು;
ಕಲೆಯ ಪ್ರಾಕಾರಗಳೇನೋ ಎಂಬಂತೆ ವಿಧ-ವಿಧವಾಗಿ ಅಲ್ಲಾಡುವ ಕುಂಡಿಗಳು;
ಬೆಳೆದದ್ದನ್ನೆಲ್ಲ ಬುಟ್ಟಿಗೆ ತುಂಬಿ ಬಟ್ಟ ಬಯಲಿನಲ್ಲಿ ಕೂತವನೊಬ್ಬ;
ರಣರಂಗದಲ್ಲಿ ಬಿದ್ದ ಕಳೇಬರಗಳಂತೆ ಕಡಿದು ಉರುಳಿಸಿದ ತೆಂಗಿನ ಮರಗಳು, ಅವುಗಳ ನಡುವೆ ಕಳೆದದ್ದೇನನ್ನೋ ಹುಡುಕುತ್ತಿರುವಂತ ಒಂಟಿ ಹಸು;
ತೇವವನ್ನು ಹೊತ್ತ ಗಾಳಿಯ ಸುವಾಸನೆ;
ತರತರಹದ ತಿನಿಸುಗಳು;
ಅಲ್ಲೊಬ್ಬ ನಸುನಗುವ ಓದುಗ ಇಲ್ಲೊಂದು ಧ್ಯಾನಿ;
ಹಾಸ್ಯ, ಇಸ್ಪೀಟು, ನಿದ್ದೆ, ಕಣ್ಣು-ಮುಚ್ಚಾಲೆ, ಇನ್ನೂ ಏನೇನೋ ವಹಿವಾಟುಗಳು;
ಎದುರು ರೈಲಿನ ಹಟಾತ್ ಶಬ್ದಕ್ಕೆ ಮಗುವಿನ ಕಿವಿ ಮುಚ್ಚುವ ತಾಯಿ;
ಕಿವಿಗೇ ಪೋನನ್ನು ಸಿಕ್ಕಿಸಿ, ತಲೆಯಾಡಿಸಿ ಬೆರಳು ಬಡಿದು ಕೊನೆಗೆಲ್ಲ ಮರೆತು ಜೋರಾಗಿ ದನಿಗೂಡಿಸುವವರು;
ಎಲ್ಲವನ್ನೂ ಎಲ್ಲೆಂದರಲ್ಲಿ ಹರಡುವವರು, ವೇಸ್ಟ್ ಪೇಪರನ್ನೂ ನಾಜೂಕಾಗಿ ಮಡಿಚಿ ಬಿಸಾಡುವವರು;
ಕತ್ತಲೆಯಲ್ಲಿ ಮಿನುಗಿ ಮಾಯವಾಗುವ ಊರು-ಕೇರಿಗಳು;
ಕಾರ್ಖಾನೆಗಳು, ಬೆಳಕಿನ ದ್ವೀಪಗಳು - ನೀವಿಲ್ಲದೆಯೂ ಪ್ರಪಂಚ ನಡೆಸುತ್ತಿದ್ದೇವೆ ಎಂದಂತೆ;
ರಸ್ತೆ ಬಿಟ್ಟು ಹಳಿ ಏರಿದ ಪಯಣಿಗನಿಗೆ ಮರುಕಳಿಸುವ ಸ್ವಪ್ನಗಳಂತೆ ಮೇಲು-ಕೆಳಗಿನ ಸೇತುವೆಗಳಲ್ಲಿ ಸಾಗುವ ವಾಹನಗಳು;
ಕತ್ತಲೆ-ಬೆಳಕಿನಾಟ;
ಸಾಗುವ ಸಾಲು ಕಿಟಕಿಗಳ ಬೆಳಕು ನೆಲದಮೇಲೆ ಮೆರವಣಿಗೆ;
ರಾತ್ರಿ ರೈಲಿನದು ಬೇರೆಯೇ ಪ್ರಪಂಚ;
ಎಲ್ಲಿದ್ದರೂ ನಮ್ಮತನ ಬಿಡೆವು ಎಂಬಂತೆ ದಿನಚರಿ ಮುನ್ನಡೆಸುವವರು;
ಸರಿಹೋಗದೆ ತೊಳಲಾಡುವವರು;
ಮಾಸಿ ಜೋಲಾಡುವ ಟೀಶರ್ಟುಗಳೊಡನೆ ಲೇಬಲ್ ಕಿತ್ತಿರದ ಶಾಲಿನ ಪೈಪೋಟಿ;
ಜೋರು ಗೊರಕೆಗೆ ಹೊರಳಾಟದ ಜೋಡಿ;
ಕೋಫಿ-ಚಾಯಾಗಳ ಸದ್ದು ಅಡಗಿ ಮತ್ತೆ ಶುರು ಆಗುವವರೆಗೂ ರೈಲೇ ತೊಟ್ಟಿಲು.
* * * * *

Labels: Travel
0 Comments:
Post a Comment
Subscribe to Post Comments [Atom]
<< Home